ಜೈ ಚಾಮುಂಡೇಶ್ವರಿ ಫಿಲಂಸ್ ಲಾಂಛನದಲ್ಲಿ ರೇವಣ್ಣ ಹಾಗೂ ಅನಿಲ್ಕುಮಾರ್ ನಿರ್ಮಿಸುತ್ತಿರುವ ಬಿಕೋ ಚಿತ್ರದ ಪ್ರತಿ ಸಿದ್ಧವಾಗಿದೆ. ಲವ್ ಆಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಐದು ಹಾಡುಗಳಿದ್ದು ಇದೇ ತಿಂಗಳಿನಲ್ಲಿ ಹಾಡುಗಳ ಧ್ವನಿಸುರುಳಿ ಬಿಡುಗಡೆಯಾಗಲಿದ್ದು ಮುಂದಿನ ತಿಂಗಳು ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಸಂದೀಪ್ ದಕ್ಷ್ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಕುಮಾರ್.ಜಿ.ಛಾಯಾಗ್ರಹಣ, ಪೀಟರ್ ಎಸ್.ಜೋಸೆಫ್ ಸಂಗೀತ, ಅರುಣ್ ಶೆಟ್ಟಿ ಸಂದೀಪ್ ಸಾಹಿತ್ಯ, ಮೈಸೂರ್ ಕುಮಾರ್ ನೃತ್ಯ ನಿರ್ದೇಶನದ ಸುಬ್ರಹ್ಮಣ್ಯ ಸಾಹಸ, ರವಿಚಂದ್ರನ್, ಸಂಕಲನ, ಮಹಾದೇವೇಗೌಡ ಸಹ ನಿರ್ಮಾಪಕರಾಗಿದ್ದು ರೇವ (ಮೈಸೂರು) ರಿಷಿತಾ ಮಲ್ನಾಡ್, ರಾಕ್ಲೈನ್ ಸುಧಾಕರ್, ಸಿದ್ದರಾಜು, ಸುಧಾಪ್ರಸನ್ನ, ಮೈಸೂರು ಬಾಲಣ್ಣ ಮಹದೇವೇಗೌಡ, ಯೋಗೀಶ್, ಪ್ರಮಿಳಾ ಹಾಗೂ ನಿಶ್ಚಿತ ತಾರಾ ಬಳಗದಲ್ಲಿದ್ದಾರೆ.